Saturday, April 26, 2014


ಪ್ರವಾದಿ (ಸ) ಹೇಳಿದರು: ಯಾವುದಾದರೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ದವಾಗಿದೆ.
[ಅಬೂದಾವೂದ್]

ಪ್ರವಾದಿ (ಸ) ಮದ್ಯಪಾನ ಮಾಡುವುದರಿಂದ ಮತ್ತು ಜೂಜಾದುವುದರಿಂದ ತಡೆದಿರುವರು. 'ಕೂರ್ಬ' ಮತ್ತು 'ಗುಬೈರಾ'ದಿಂದಲೂ ತಡೆದಿರುವರು. ಪ್ರವಾದಿ (ಸ) ಮತ್ತೆ ಹೇಳಿದರು ಅಮಲುಂಟು ಮಾಡುವಂತಹ ಪ್ರತಿಯೊಂದು ವಸ್ತು ನಿಷಿದ್ದವಾಗಿದೆ.
[ಅಬೂ ದಾವೂದ್]

ನಾನು ಪ್ರವಾದಿವರ್ಯರಲ್ಲಿ (ಸ) ಈ ರೀತಿ ವಿಚಾರಿಸಿದೆ - "ನಾವು ಚಳಿ ವಾಸಿಸುತ್ತೇವೆ. ಅಲ್ಲಿ ಅತ್ಯಂತ ಶ್ರಮದ ಕೆಲಸ ಮಾಡುತ್ತೇವೆ. ನಾವು ಶಕ್ತಿ ಆರ್ಜಿಸಲಿಕ್ಕೆ ಮತ್ತು ನಮ್ಮಲ್ಲಿ ಉಂಟಾಗುವ  ಚಳಿಯನ್ನು ದೂರ ಮಾಡಲಿಕ್ಕೆ ಇಂತಹ ಗೋಧಿಯ ಶರಾಬನ್ನು ತಯಾರಿಸುತ್ತೇವೆ. ಪ್ರವಾದಿ (ಸ) ಕೇಳಿದರು- 'ಅದು ಮತ್ತು ಬರಿಸುತ್ತದೆಯೇ' ನಾನು ಹೌದೆಂದಾಗ ಪ್ರವಾದಿ (ಸ) ಹೇಳಿದರು - ಅದರಿಂದ ದೂರವಿರಿ.
[ಅಬೂ ದಾವೂದ್]

ಪ್ರವಾದಿ (ಸ) ಹೇಳಿದರು: ಪ್ರತಿಯೊಂದು ಅಮಲು ಪದಾರ್ಥ ಶರಾಬು ಆಗಿದೆ ಮತ್ತು ಪ್ರತಿಯೊಂದು ಶರಾಬು ನಿಷಿದ್ದವಾಗಿದೆ. 
[ಅಹ್ಮದ್]