ಪ್ರವಾದಿ (ಸ) ಹೇಳಿದರು: ಯಾವುದಾದರೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ
ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ದವಾಗಿದೆ.
[ಅಬೂದಾವೂದ್]
ಪ್ರವಾದಿ (ಸ) ಮದ್ಯಪಾನ ಮಾಡುವುದರಿಂದ ಮತ್ತು ಜೂಜಾದುವುದರಿಂದ ತಡೆದಿರುವರು.
'ಕೂರ್ಬ' ಮತ್ತು 'ಗುಬೈರಾ'ದಿಂದಲೂ ತಡೆದಿರುವರು. ಪ್ರವಾದಿ (ಸ) ಮತ್ತೆ ಹೇಳಿದರು ಅಮಲುಂಟು ಮಾಡುವಂತಹ
ಪ್ರತಿಯೊಂದು ವಸ್ತು ನಿಷಿದ್ದವಾಗಿದೆ.
[ಅಬೂ ದಾವೂದ್]
ನಾನು ಪ್ರವಾದಿವರ್ಯರಲ್ಲಿ (ಸ) ಈ ರೀತಿ ವಿಚಾರಿಸಿದೆ - "ನಾವು ಚಳಿ
ವಾಸಿಸುತ್ತೇವೆ. ಅಲ್ಲಿ ಅತ್ಯಂತ ಶ್ರಮದ ಕೆಲಸ ಮಾಡುತ್ತೇವೆ. ನಾವು ಶಕ್ತಿ ಆರ್ಜಿಸಲಿಕ್ಕೆ ಮತ್ತು
ನಮ್ಮಲ್ಲಿ ಉಂಟಾಗುವ ಚಳಿಯನ್ನು ದೂರ ಮಾಡಲಿಕ್ಕೆ ಇಂತಹ
ಗೋಧಿಯ ಶರಾಬನ್ನು ತಯಾರಿಸುತ್ತೇವೆ. ಪ್ರವಾದಿ (ಸ) ಕೇಳಿದರು- 'ಅದು ಮತ್ತು ಬರಿಸುತ್ತದೆಯೇ' ನಾನು
ಹೌದೆಂದಾಗ ಪ್ರವಾದಿ (ಸ) ಹೇಳಿದರು - ಅದರಿಂದ ದೂರವಿರಿ.
[ಅಬೂ ದಾವೂದ್]
ಪ್ರವಾದಿ (ಸ) ಹೇಳಿದರು: ಪ್ರತಿಯೊಂದು ಅಮಲು ಪದಾರ್ಥ ಶರಾಬು ಆಗಿದೆ ಮತ್ತು
ಪ್ರತಿಯೊಂದು ಶರಾಬು ನಿಷಿದ್ದವಾಗಿದೆ.
[ಅಹ್ಮದ್]
No comments:
Post a Comment